Index   ವಚನ - 7    Search  
 
ನಿರಂಜನ ತನಗೆ ತಾನೆ ಸುರಂಜನವತೋರಲು ಅಂಗ ಲಿಂಗವಾಯಿತ್ತು; ಆ ಅಂಗ ಲಿಂಗ ಸಂಗೊಳಿಸಿದ ಉಪಚಾರ ಉಪಮೆ ಸಮರಸವಾಯಿತ್ತು. ಆ ಸಮರಸವೇ ಸಾಕಾರವಾಗಿ ತನ್ನ ಪ್ರತಿಬಿಂಬವೆ ನೋಡಿಕೊಳ್ಳುವುದಕ್ಕೆ ಕನ್ನಡಿಯೊಳಗಿನ ರೂಹಿನಪರಿಯಲಿ ಅನಾದಿ ಶರಣ ನಿನ್ನೊಳಗೆ ನೀನೇ ನಾನೆಂಬೋ ಭಾವಕ್ಕೆ ಎದುರಾಗಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.