Index   ವಚನ - 15    Search  
 
ಪುಣ್ಯವಿಷ್ಟು, ಪಾಪವಿಷ್ಟು, ಕರ್ಮವಿಷ್ಟು, ಧರ್ಮವಿಷ್ಟು, ಶೀಲವಿಷ್ಟು, ದುಶ್ಶೀಲವಿಷ್ಟು, ಸಜ್ಜನಸಂಗವಿಷ್ಟು, ದುರ್ಜನರಸಂಗವಿಷ್ಟು, ಹಿತವಿಷ್ಟು, ಅಹಿತವಿಷ್ಟು, ಸ್ತುತಿಯಿಷ್ಟು, ನಿಂದ್ಯವಿಷ್ಟು, ಅಜ್ಞಾನವಿಷ್ಟು, ಸುಜ್ಞಾನವಿಷ್ಟು, ಚಿಂತೆಯಿಷ್ಟು, ಸಂತೋಷವಿಷ್ಟು, ಮೋಹವಿಷ್ಟು, ನಿರ್ಮೋಹವಿಷ್ಟು, ಆಶೆಯಿಷ್ಟು, ವೈರಾಗ್ಯವಿಷ್ಟು, ಅಹಂಕಾರವಿಷ್ಟು, ನಿರಹಂಕಾರವಿಷ್ಟು, ಕ್ರೋಧವಿಷ್ಟು, ಶಾಂತಿಯಿಷ್ಟು, ಯೋಗವಿಷ್ಟು, ಭೋಗವಿಷ್ಟು, ಲಬ್ಧವಿಷ್ಟು, ಹೇಯವಿಷ್ಟು,-ಉತ್ತಮ-ಮಧ್ಯಮ-ಕನಿಷ್ಠವೆಂಬ ಮೂರರೊಳಗೆ ಒಂದೂ ನಿಜವಿಲ್ಲದೆ ಬಡಯೆತ್ತಿನ ಮುಕಳ್ಯಾಗ ಶಗಣಿ ಸಿಕ್ಕಂತೆ ಬಹುಗುಣಿಯಾಗಿ ಬೆಲ್ಲ ಬೇವು ಕಲಸಿ ಸವಿದಂತೆ ವ್ಯರ್ಥವಾಗಿ ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.