ಅಜ್ಞಾನವಳಿದು ಸುಜ್ಞಾನಿಯಾಗಿ,
ಅಂತರಂಗದವಗುಣವ ಹೊರಹಾಕಿ,
ಅಂತಃಕರಣಗಳ ಕರಿಗೊಳಿಸಿ,
ಮಾನಸಪೂಜೆಯ ಮನೋಹರವಾಗಿ,
ಶುದ್ಧಸ್ಥಾವರಕ್ಕೆ ಪ್ರತಿಸ್ಥಾವರವಾಗಿ
ಅಸ್ಥಿ ಚರ್ಮ ಮಜ್ಜೆ ಮಾಂಸ
ರುಧಿರ-ಮೊದಲಾದವನೆಲ್ಲಾ ಶುಷ್ಕಗೊಳಿಸಿ,
ಸುಮ್ಮನೆ ಸತ್ತು ಸತ್ತು ಹೋಯಿತು
ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
Art
Manuscript
Music
Courtesy:
Transliteration
Ajñānavaḷidu sujñāniyāgi,
antaraṅgadavaguṇava horahāki,
antaḥkaraṇagaḷa karigoḷisi,
mānasapūjeya manōharavāgi,
śud'dhasthāvarakke pratisthāvaravāgi
asthi carma majje mānsa
rudhira-modalādavanellā śuṣkagoḷisi,
sum'mane sattu sattu hōyitu
anantakāla anantajanma.
Nirupama nirāḷa mahatprabhu mahāntayōgi.