ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು.
ನಾಮವೊಂದೇ ರೂಪವೊಂದೇ ಕ್ರೀವೊಂದೇ
ಕಾಯವೊಂದೇ ಕರಣವೊಂದೇ
ಆತ್ಮವೊಂದೇ ಪರಮಾತ್ಮವೊಂದೇ
ನೀರು ಗಟ್ಟಿಗೊಂಡ ಆಣೆಕಲ್ಲು
ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ.
ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು
ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು.
ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ,
ಆ ಮಹತ್ವವು ತನಗನ್ಯವೇ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ?
Art
Manuscript
Music
Courtesy:
Transliteration
Satya sadācāra samyajñānavembuvu mūru.
Nāmavondē rūpavondē krīvondē
kāyavondē karaṇavondē
ātmavondē paramātmavondē
nīru gaṭṭigoṇḍa āṇekallu
nīrē āyitalladē kallāgalillā.
Idarante śaraṇa oḷahoragemba sanśaya aḷidu
sarvavū tānemba satyavē satyavāgihanu.
Idē satya satyavendu mahatva tōridare satyavē allā,
ā mahatvavu tanagan'yavē
nirupama nirāḷa mahatprabhu mahāntayōgi?