Index   ವಚನ - 27    Search  
 
ತನ್ನ ವಿನೋದಕ್ಕೆ ತಾನೇ ಹಲವಾದುದರಿತು, ಹಲವಾದ ಹಲವಿನೊಳಗೆ ತಾ ಹಲವಾಗದೆ, ಹಲವು ಹಲವಲ್ಲವೆಂದು ತಾನೇ ಹಲವೆಂದು, ಹಲವು ತಾನೆಂದು, ಹಲವು ಹಲವೆಂದರೇನು, ತಾನು ತಾನೆಂದರಿಯನು. ತಾನೇ ಅಲ್ಲದೆ, ಹಲವು ಎಲ್ಲಿಹದೊ, ಹಲವು ಇಲ್ಲ. ಬೀಜ ವೃಕ್ಷವಾಯಿತ್ತೆ? ವೃಕ್ಷ ಬೀಜವಾಯಿತ್ತೆ? ಬೀಜವೃಕ್ಷವಾದ ಮೇಲೆ ಬೀಜವೇನಾಯಿತ್ತು? ಇದ ತಿಳಿದು ಸರ್ವಲೀಲವ ಸಮಾಪ್ತಮಾಡಿ ಸರ್ವಸಮ ನಿರೀಕ್ಷಣೆಯಲ್ಲಿ ಸಂತುಷ್ಟಿವಡದು ಅಸ್ತಮಾನದ ಆದಿತ್ಯನಂತೆಯಿರುವುದೇ ಸಮ್ಯಕ್‍ಜ್ಞಾನದೊಳಗೆ ತೋರಿದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.