ಚಿತ್ತೆಂಬೊ ಬಿತ್ತುವಡೆದು, ಕಳೆಯೆಂಬೋ ಮೊಳಕೆ ಹುಟ್ಟಿ,
ಮಾಯವೆಂಬೋ ವೃಕ್ಷವಾಯಿತ್ತು.
ಆ ವೃಕ್ಷದಲ್ಲಿ ಹಲವು ಶಾಖೆ, ಹಲವು ಎಲೆ, ಹಲವು ಪುಷ್ಪ,
ಹಲವು ಕಾಯಿ, ಹಲವು ಸವಿ, ಹಲವು ಬೀಜ,
ಹಲವು ಫಲವಾಯಿತಲ್ಲದೆ,
ನಾನೆಂಬುದೇನು? ನೀನೆಂಬುದೇನು? ತಾನೆಂಬುದೇನು? ಏನೆಂಬುದೇನು?
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.