Index   ವಚನ - 17    Search  
 
ಕಳಾಯುಕ್ತಮಾಗಿ ರೂಪುಳ್ಳ ಹೆಣ್ಣನು ಲಿಂಗಕ್ಕೆ ಕೊಟ್ಟು, ಬಿಂದುಯುಕ್ತಮಾಗಿ ರುಚಿಯುಳ್ಳ ಮಣ್ಣನು ಗುರುವಿಗೆ ಕೊಟ್ಟು, ನಾದಯುಕ್ತಮಾಗಿ ತೃಪ್ತಿಯುಳ್ಳ ಹೊನ್ನನು ಜಂಗಮಕ್ಕೆ ಕೊಟ್ಟು, ಕರಿಯು ನುಂಗಿದ ಕಪಿತ್ಥಫಲದಂತೆ, ಹೊರಗೆ ಸಾಕಾರಮಾಗಿಯೂ, ಒಳಗೆ ನಿರಾಕಾರಮಾಗಿಯೂ ಇರ್ಪುದೇ ಭಕ್ತಿಯು; ಉಳಿದುದೆಲ್ಲಾ ಅಭಕ್ತಿಯು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.