Index   ವಚನ - 33    Search  
 
ಸೂರ್ಯನೇ ತೀರ್ಥವು, ಚಂದ್ರನೇ ಪ್ರಸಾದವು, ತೀರ್ಥವೇ ಬಿಂದುರೂಪಮಾಗಿಹುದು, ಪ್ರಸಾದವೇ ಕಳಾರೂಪಮಾಗಿಹುದು. ತೀರ್ಥವೇ ಕರ್ಮಕರ್ತೃವು, ಪ್ರಸಾದವೇ ಜ್ಞಾನಕರ್ತೃವು, ತೀರ್ಥದಲ್ಲಿ ಶುಚಿಯು, ಪ್ರಸಾದದಲ್ಲಿ ತೃಪ್ತಿಯು, ತೀರ್ಥದಲ್ಲಿರ್ಪ ದೀಪನವನ್ನೂ ಪ್ರಸಾದದಲ್ಲಿರ್ಪ ಕಳಂಕವನ್ನೂ ಲಿಂಗದಲ್ಲಿ ತಿಳಿದು, ತೀರ್ಥದಲ್ಲಿರ್ಪ ಶುಚಿಯಿಂದ ಪ್ರಸಾದದಲ್ಲಿರ್ಪ ಕಳಂಕವಂ ಕೆಡಿಸಿ, ಪ್ರಸಾದದಲ್ಲಿರ್ಪ ತೃಪ್ತಿಯಿಂದ ತೀರ್ಥದಲ್ಲಿರ್ಪ ದೀಪನವನ್ನು ಕೆಡಿಸಿ, ಜ್ಞಾನದಲ್ಲಿ ಪರಿಪಕ್ವಮಾದ ಪ್ರಸಾದವನ್ನೂ ಕರ್ಮದಲ್ಲಿ ಪರಿಪಕ್ವಮಾದ ತೀರ್ಥವನ್ನೂ ತನ್ನೊಳಗೆ ತಾನು ತಿಳಿದು ಸೇವಿಸಬಲ್ಲಡೆ ತಾನೇ ಶಿವನಪ್ಪನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.