ಶಬ್ದಮಧ್ಯದಲ್ಲಿರ್ಪ ಅರ್ಥವೇ ಜೀವನು,
ತಮೋರೂಪಮಾಗಿಹನು.
ಜ್ಞಾನಮಧ್ಯದಲ್ಲಿರ್ಪ ಅರ್ಥವೇ ಪರಮನು,
ಸತ್ವರೂಪಮಾಗಿಹನು.
ಜ್ಞಾನಶರೀರದಲ್ಲಿರ್ಪ ಪರಮಾರ್ಥಭಾವವೆಂಬ ಹಸ್ತದಲ್ಲಿ
ಬುದ್ಧಿಯೆಂಬ ತ್ರಿಗುಣಾತ್ಮಕಮಪ್ಪ ಮುನ್ಮೊನೆಯಲಗಂ ಪಿಡಿದು,
ಆ ಶಬ್ದಶರೀರಂ ಭೇದಿಸಿ, ತನ್ಮಧ್ಯದಲ್ಲಿರ್ಪ ಅರ್ಥವನ್ನು
ಆ ಜ್ಞಾನವು ಗ್ರಹಿಸಿದಲ್ಲಿ,
ಜ್ಞಾನಾರ್ಥದೊಳಗೆ ಬೆರದು, ಎರಡೂ ಒಂದಾಗಿ,
ಆ ಅರ್ಥವೇ ಸತ್ಯವಾಗಿ ಆನಂದಮಯಮಪ್ಪುದು.
ಜ್ಞಾನವು ಗ್ರಹಿಸದೇ ಬಿಟ್ಟರೆ ಶಬ್ಧಾರ್ಥವೇ ದುರರ್ಥಮಾಗಿ,
ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ಕೋಟಲೆಗೊಳ್ಳುತ್ತಿರ್ಪುದೇ ಜೀವನು,
ಅದೇ ಪರಮನು.
ತತ್ಪರಿಗ್ರಹವೇ ಐಕ್ಯಮಾದಲ್ಲಿ
ಎರಡೂ ಒಂದೇ ಆಗಿರ್ಪುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Śabdamadhyadallirpa arthavē jīvanu,
tamōrūpamāgihanu.
Jñānamadhyadallirpa arthavē paramanu,
satvarūpamāgihanu.
Jñānaśarīradallirpa paramārthabhāvavemba hastadalli
bud'dhiyemba triguṇātmakamappa munmoneyalagaṁ piḍidu,
ā śabdaśarīraṁ bhēdisi, tanmadhyadallirpa arthavannu
ā jñānavu grahisidalli,
jñānārthadoḷage beradu, eraḍū ondāgi,
Ā arthavē satyavāgi ānandamayamappudu.
Jñānavu grahisadē biṭṭare śabdhārthavē durarthamāgi,
sr̥ṣṭisthitisanhāraṅgaḷalli kōṭalegoḷḷuttirpudē jīvanu,
adē paramanu.
Tatparigrahavē aikyamādalli
eraḍū ondē āgirpudu kāṇā
mahāghana doḍḍadēśikāryaguruprabhuve.