ನೀರು ತನ್ನೊಳಗಿರುವ ಮಲಿನವಂ
ಧರೆಗೆಹತ್ತಿಸಿ ತಾನಾರಿಪೋದಡೆ
ನೀರೊಳಗಿದ್ದು ಅಗಸನೊಗೆದಂತೆ,
ಪ್ರಪಂಚವು ತನ್ನೊಳಗಿರ್ದ ಮಲಿನವಂ ನನಗೆ ಹತ್ತಿಸಿ
ತಾನು ಬಯಲಾಗಿಪೋದಡೆ,
ಆ ಪ್ರಪಂಚದೊಳಗಿರ್ದ ನನ್ನಂ ಕಾಲನು ಕೊಲ್ಲುತಿರ್ಪನಯ್ಯಾ.
ನಿನಗನುಭವರೂಪಮಾದ ನಾನೆಂಬ
ದಿವ್ಯದುಕೂಲವನ್ನು ಹೊದ್ದು,
ಮಾಸಿ, ಒಗೆದು, ಹರಿದುಬಿಡದೆ,
ನಿನ್ನ ಪರತತ್ವವೆಂಬ ಭಂಡಾರದಲ್ಲಿ
ಜ್ಞಾನವೆಂಬ ಪೆಟ್ಟಿಗೆಯೊಳಗೆ ಗಳಿಗೆವಡೆಯದಂತೆ,
ಪುರಾತನಕವಳಿಗೆಯೊಳಗೆ ನನ್ನನಿಟ್ಟು ರಕ್ಷಿಸು ಕಂಡ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Nīru tannoḷagiruva malinavaṁ
dharegehattisi tānāripōdaḍe
nīroḷagiddu agasanogedante,
prapan̄cavu tannoḷagirda malinavaṁ nanage hattisi
tānu bayalāgipōdaḍe,
ā prapan̄cadoḷagirda nannaṁ kālanu kollutirpanayyā.
Ninaganubhavarūpamāda nānemba
divyadukūlavannu hoddu,
māsi, ogedu, haridubiḍade,
ninna paratatvavemba bhaṇḍāradalli
jñānavemba peṭṭigeyoḷage gaḷigevaḍeyadante,Purātanakavaḷigeyoḷage nannaniṭṭu rakṣisu kaṇḍyā
mahāghana doḍḍadēśikāryaguruprabhuve.