Index   ವಚನ - 42    Search  
 
ವೀರಶೈವ ಸನ್ಮಾರ್ಗ ಗುರೂಪದೇಶರೆನಿಸಿ ತಮ್ಮಯ ನವಸ್ಥಾನದಲ್ಲಿರ್ದು ಮೂರ್ತಿಗೊಂಡಿರ್ಪ ನವಲಿಂಗಮಂತ್ರಗಳಿಗೆ ಸುಗಂಧ ಸುರಸ ಸುರೂಪು ಸುಸ್ಪರಿಶನ ಸುಶಬ್ದ ಸುತೃಪ್ತಿ ಅಖಂಡತೃಪ್ತಿ ಮಹಾತೃಪ್ತಿ ಮಹಾಪರಿಪೂರ್ಣತೃಪ್ತಿ ಕಡೆಯಾದ ನವರಸಾಮೃತಗಳ ಆ ಲಿಂಗಮಂತ್ರನಿರೀಕ್ಷಣೆಗಳನುಳಿದು, ಕ್ರಿಯಾರ್ಪಣ ಜ್ಞಾನಾರ್ಪಣ ಮಹಾಜ್ಞಾನಾರ್ಪಣ ತ್ರಿವಿಧಸಂಬಂಧದಾಚರಣೆಯ ಸಾವಧಾನ ಸಪ್ತವಿಧಭಕ್ತಿಯಿಂ ಮರೆದು, ಪಂಚಪರುಷಮಂ ಮಾಡದೆ, ಜಡಜೀವರಂತೆ ಭೌತಿಕಲಿಂಗೋದಕಂಗಳ ಭುಂಜಿಸಿ, ಅಂಗಭೋಗವಿಷಯಾತುರನಾಗಿರ್ಪುದೆ ಅಂತರಂಗದ ತೃತೀಯ ಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.