ವಚನ - 1116     
 
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದೊಳಗಣ ತಾವರೆಯಂತೆ, ಹೊದ್ದಿಯೂ ಹೊದ್ದದಂತೆ, ಇದ್ದೆಯಲ್ಲಾ ಬಸವಣ್ಣಾ. ಜಲದಿಂದಲಾದ ಮೌಕ್ತಿಕದಂತೆ, ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಗುಹೇಶ್ವರಲಿಂಗದ ಆಣತಿವಿಡಿದು, ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ ಮತವನೇನ ಮಾಡಬಂದೆಯಯ್ಯಾ, ಸಂಗನಬಸವಣ್ಣಾ?