ವಚನ - 1131     
 
ಕೈಯಲ್ಲಿ ಕಟ್ಟುವರು, ಕೊರಳಲ್ಲಿ ಕಟ್ಟುವರು, ಮೈಯಲ್ಲಿ ಕಟ್ಟುವರು, ಮಂಡೆಯಲ್ಲಿ ಕಟ್ಟುವರು, ಮನದಲ್ಲಿ ಲಿಂಗವ ಕಟ್ಟರಾಗಿ! ಆದ್ಯರು ಹೋದರೆಂದು ವಾಯಕ್ಕೆ ಸಾವರು. ಸಾವುದು ವಿಚಾರವೆ ಗುಹೇಶ್ವರಾ?