ವಚನ - 1162     
 
ಗುರುವೆಂದರಿಯರು, ಹಿರಿಯರೆಂದರಿಯರು, ದೇವರೆಂದರಿಯರು, ಭಕ್ತರೆಂದರಿಯರು. ಲಿಂಗವೆಂದರಿಯರು, ಜಂಗಮವೆಂದರಿಯರು, ಬಂದ ಬರವನರಿಯರು, ನಿಂದ ನಿಲವನರಿಯರು. ಶಿವಶರಣರ ನೋಯಿಸುವ ಪಾತಕರನೇನೆಂಬೆ? ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು.