ವಚನ - 1166     
 
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಡಗಿದ ಕರಸ್ಥಲ ಇನ್ನಾರಿಗೆ ಸಾರಿತ್ತಯ್ಯಾ ಬಸವಣ್ಣಂಗಲ್ಲದೆ? ನಿರ್ವಂಚನೆಯುಳ್ಳ ನಿತ್ಯನಿಜ ಮಾಟಕೂಟವನುಳ್ಳು ಸತ್ಯ ಭಕ್ತಿಸ್ಥಲವದಾರಿಗೆ ಸಾರಿತ್ಯಯ್ಯ ಬಸವಣ್ಣಂಗಲ್ಲದೆ? ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಮೊರೆಯ ಹೊಕ್ಕು ನಾನು ಬದುಕಿದೆನು.