ಚಿತ್ತದ ಸ್ನೇಹವ ಸಜ್ಜನಕ್ಕರ್ಪಿತವ ಮಾಡೆ.
ನಟ್ಟಿದ್ದ ಬೇಟಕ್ಕೆ ತಾಗು ತಡೆಯುಂಟೆ ಎಲೆ ಮರುಳೆ?
ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಡಾವರಿಸುತ್ತಿಪ್ಪುದೀ ಮನವು.
ಈ ಮನವು ಚಿಹ್ನೆದೋರದ ಘನಕ್ಕೆ ಬೆಂಬತ್ತಿ ಬಿಡದಿರಬಲ್ಲಡೆ,
ತನ್ಮೂರ್ತಿ ತನ್ನಲ್ಲಿ ಗುಹೇಶ್ವರಲಿಂಗವು!
Transliteration Cittada snēhava sajjanakkarpitava māḍe.
Naṭṭidda bēṭakke tāgu taḍeyuṇṭe ele maruḷe?
Āturadalli kaḷavaḷisi, vyākuḷadalli ḍāvarisuttippudī manavu.
Ī manavu cihnedōrada ghanakke bembatti biḍadiraballaḍe,
tanmūrti tannalli guhēśvaraliṅgavu!
Hindi Translation चित्त का स्नेह सज्जन को अर्पित करे तो ;
रहे प्रेम को रोक-थाम है क्या पागल ?
आतुर में चिंतित होकर व्याकुलता में तड़प रहा है मन।
यह मन चिह्न न दिखाये घन का पीछा करना न छोडे तो,
वह मूर्ति अपने में है गुहेश्वर लिंग !
Translated by: Eswara Sharma M and Govindarao B N