ವಚನ - 1182     
 
ಜಂಗಮವೆ ಲಿಂಗವೆಂದು ನಂಬಿದ ಬಳಿಕ ಸಂದೇಹವಿಲ್ಲದೆ ಇರಬೇಕು ನೋಡಾ. ಸಂದುಸಂಶಯವಳಿದು ಸಯವಾದ ಭಕ್ತಿ, ಹಿಮ್ಮೆಟ್ಟಿದಡೆ ಹೋಯಿತ್ತಲ್ಲಾ. ಒಪ್ಪಚ್ಚಿ ಬಳಿಕ ಕಿಂಕಿಲನಾಗಿ, ಮತ್ತೊಪ್ಪಚ್ಚಿ ಬಳಿಕ ಅಹಂಕಾರಿಯಾದಡೆ ಹೋಗ ನೂಕುವ ಕಾಣಾ, ನಮ್ಮ ಗುಹೇಶ್ವರಲಿಂಗವು.