Index   ವಚನ - 10    Search  
 
ಜಯಜಯ ಪರಮೇಶ ಪರಬ್ರಹ್ಮ ಜಯ ಜಯ ನಿತ್ಯಾನಂದ ಹರಿಯಜಸುರರೊಂದ್ಯ ಜಯಜಯ ಗಿರಿಸುತಪ್ರಾಣೇಶ ಜಯಜಯ ಪರಮುನಿಗಳಾತ್ಮ ಜಯಜಯ ಪರಂಜ್ಯೋತಿರ್ಲಿಂಗ ಜಯಜಯ ತರಣಿಕೋಟಿತೇಜ ಜಯಜಯ ಉರಗಾಭರಣಭವ ಜಯಜಯ ಕರುಣರಸಸಿಂಧು ಜಯಜಯ ಮುರಹರ ಮೃತರಹಿತ ಜಯಜಯ ||1|| ತ್ರಿಪುರಸಂಹರ ನಿತ್ಯ ಜಯಜಯ ಅಪರಂಪಾರಮೂರ್ತಿ ಜಯಜಯ ಕೃಪತ್ರೈವಲೋಕೇಶ ಜಯಜಯ ಉಪಮೆರಹಿತಪುಣ್ಯ ಜಯಜಯ ಜಪತಪಕೊಲಿವಾತ ಜಯಜಯ ಅಪಹರಿ ಶಿಖೆಯೊಳಿಟ್ಟ ಜಯಜಯ ವಿಪಿನಕಾಷ್ಠಾರಿನೇತ್ರ ಜಯಜಯ ನಿಪುಣ ನಿರ್ಗುಣ ಶಂಭು ಜಯಜಯ ||2|| ಮಾರಾರಿ ಮದಚರ್ಮ ಜಯಜಯ ಮೂರುನೇತ್ರದ ಭವ ಜಯಜಯ ಈರೇಳು ಭುವನಾತ್ಮಜ ಜಯಜಯ ವಾರಿಜ ಅರಿಭೂಷ ಜಯಜಯ ಮೇರುವಿಗಣಪೂಜ್ಯ ಜಯಜಯ ಪೂರಿತ ಪುಣ್ಯಾಂಗ ಜಯಜಯ ಧಾರುಣಿ ದಯಪಾಲ ಜಯಜಯ ಕರುಣಿ ಚಿನ್ಮಯ ಜಯಜಯ ||3|| ನಂದಿವಾಹನ ನಿತ್ಯ ಜಯಜಯ ಅಂಧಕಾಸುರವೈರಿ ಜಯಜಯ ಕಂದುಗೊರಳ ಶಿವನೆ ಜಯಜಯ ಸಂದ ಕುಣಪಶೂಲ ಜಯಜಯ ಕಂದಗೆ ವರವಿತ್ತ ಜಯಜಯ ಗಂಧರ್ವರಿಗೊಲಿದೆ ಜಯಜಯ ಇಂದ್ರಪೂಜಿತಲಿಂಗ ಜಯಜಯ ತಂದೆತಾಯಿಲ್ಲದ ಮೋನ ಜಯಜಯ||4|| ಭವರೋಗಕ್ಕೆ ವೈದ್ಯ ಜಯಜಯ ಶಿವ ವಿಶ್ವಕುಟುಂಬಿ ಜಯಜಯ ಜವನ ಸಂಹರ ಅಮಲ ಜಯಜಯ ಪವಿತ್ರಸ್ವರೂಪಕಾಯ ಜಯಜಯ ಭುವನ ಸರ್ವಕೆ ದೇವ ಜಯಜಯ ಕುವರ ಹಂಪನ ಪ್ರಾಣ ಜಯಜಯ ದೇವ ಗುರುಸಿದ್ಧಮಲ್ಲ ಜಯಜಯ ಕವಿವ ದುರಿತರಹ ಜಯಜಯ ||5||