ವಚನ - 1189     
 
ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ, ಕೊಂಬಿಲ್ಲದೆ ಹೂವಾಯಿತ್ತು, ಇಂಬಿನಲ್ಲಿ ಫಲದೋರಿತ್ತು! ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ ಇಂದ್ರನ ವಾಹನವ ನುಂಗಿ, ಬ್ರಹ್ಮರಂಧ್ರದೊಳಗೆ ಆಸನದ ಪವನವ ದೃಢಸೂಸಿ ಬೀಸರವೋಗದ ಶಿವಯೋಗ! ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು, ಗುಹೇಶ್ವರಲಿಂಗದಲ್ಲಿ ಯೋಗ!