ಪಂಚಭೂತಂಗಳೆ ಪಂಚವಿಂಶತಿತತ್ವಯುಕ್ತವಾಗಿ
ಶರೀರವಾಯಿತ್ತು.
ಅದು ಹೇಗೆಂದಡೆ :
ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವಯ್ಯ.
ವಾಯುವಿನಿಂದ ಪಂಚಪ್ರಾಣವಾಯುಗಳು ಹುಟ್ಟಿದವಯ್ಯ.
ಅಗ್ನಿಯಿಂದ ಬುದ್ಧೀಂದ್ರಿಯಂಗಳು ಹುಟ್ಟಿದವಯ್ಯ.
ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಹುಟ್ಟಿದವಯ್ಯ.
ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಹುಟ್ಟಿದವಯ್ಯ.
ಇಂತೀ ಚತುರ್ವಿಂಶತಿತತ್ವಯುಕ್ತವಾಗಿ
ಶರೀರವೆತ್ತಿ ಕರೆಸಿತಯ್ಯ
ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Pan̄cabhūtaṅgaḷe pan̄cavinśatitatvayuktavāgi
śarīravāyittu.
Adu hēgendaḍe:
Ākāśadinda antaḥkaraṇacatuṣṭayaṅgaḷu huṭṭidavayya.
Vāyuvininda pan̄caprāṇavāyugaḷu huṭṭidavayya.
Agniyinda bud'dhīndriyaṅgaḷu huṭṭidavayya.
Appuvininda śabdādi pan̄caviṣayaṅgaḷu huṭṭidavayya.
Pr̥thviyinda vāgādi karmēndriyaṅgaḷu huṭṭidavayya.
Intī caturvinśatitatvayuktavāgi
śarīravetti karesitayya
parumaguru paḍuviḍi sid'dhamallināthaprabhuve.