Index   ವಚನ - 16    Search  
 
ವಾಯು ಆಕಾಶವ ಬೆರೆಸಲು ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯು[ವಿ]ನ ಜನನ. ವಾಯು ಅಪ್ಪು[ವಿನ] ಬೆರಸಿದಲ್ಲಿ ಅಪಾನವಾಯು[ವಿ]ನ ಜನನ. ವಾಯು ಪೃಥ್ವಿಯ ಬೆರೆಸಿದಲ್ಲಿ ಪ್ರಾಣವಾಯು[ವಿ]ನ ಜನನ. ಇಂತಿವು ಪಂಚವಾಯು[ವಿ]ನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತು, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.