Index   ವಚನ - 19    Search  
 
ಪೃಥ್ವಿ ಆಕಾಶವ ಬೆರಸಲು, ವಾಗೀಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು, ಪ್ರಾಣೇಂದ್ರಿಯದ ಜನನ. ಪೃಥ್ವಿ ತೇಜವ ಬೆರೆಸಲು, ಪಾದೇಂದ್ರಿಯದ ಜನನ. ಪೃಥ್ವಿ ಅಪ್ಪುವ ಬೆರಸಲು, ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು, ಪಾಯುವಿಂದ್ರಿಯದ ಜನನ. ಇಂತಿವು ಚತುರ್ವಿಂಶತಿತತ್ವಂಗಳುತ್ಪತ್ಯವೆಂದು ಅರಿಯಲು ಯೋಗ್ಯವಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.