Index   ವಚನ - 31    Search  
 
ಪಿಂಡಾಂಡವ ನಿರ್ಮಿಸಿದ ಶಿವನು ಆ ಪಿಂಡದೊಳು ಜ್ಞಾನವ ಆನೆ ಕಡೆ ಇರುವೆ ಮೊದಲು ಎಂಬತ್ತನಾಲ್ಕುಲಕ್ಷ ಜೀವರಾಶಿಯೊಳಗೆ ಜ್ಞಾನಚೈತನ್ಯಸ್ವರೂಪವಾಗಿಯಿದ್ದನು. ಅದಕ್ಕೆ ಸಾಕ್ಷಿ: ``ಸಕಲಜೀವ ಶಿವಚೈತನ್ಯಂ ಸಕಲ ಜಗದಾರಾಧ್ಯದೈವಂ ಸಕಲ ದೇವರೊಂದೇ ಪಿತಾ ಪರಮೇಶ್ವರಂ ನಿತ್ಯನಿತ್ಯಃ||'' ಎಂದುದಾಗಿ, ಇದು ಕಾರಣ, ಸಕಲರಾತ್ಮಜ್ಞಾನಜ್ಯೋತಿಯಾಗಿ ನೀನೆ ಇದ್ದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.