Index   ವಚನ - 45    Search  
 
ಮುಂಡವ ಹೊಂದದ ರಣಭೂತ ಸಂಖ್ಯೆಯ ಮೀರಿದ ತಲೆಯ ಕಂಡವರುಂಟೆ? ಹೇಳಿರಣ್ಣಾ. ತಲೆಯ ಕಂಡೆನೆಂದರೆ, ಕಾಣಗುಡದೆ ಮುಂಡವೆದ್ದು ಭೂಮಂಡಲವ ನುಂಗುವುದ ಕಂಡೆ. ಹರಿ ಸುರರು, ದನುಜ ಮನುಜರು ಮುಂಡದ ಭೀತಿ ಸೋಂಕಿ ಭಯಕೊಳಗಾದುದ ಕಂಡೆ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.