Index   ವಚನ - 66    Search  
 
ಹಾಳೂರೊಳಗಣ ನಾಯಜಗಳಕ್ಕೆ ಭೂ[ತ]ಗಳೆದ್ದು ಕೆಲೆವುದ ಕಂಡೆ. ಗಗನದಲಿಪ್ಪ ಗಿಣಿ, ಮಾರ್ಜಾಲನ ನುಂಗುವುದ ಕಂಡೆನು. ಸೂಳೆ ನೆಂಟನ ನುಂಗಿ, ಕೋಳಿ ಸರ್ಪನ ನುಂಗಿ, ಅರಗು ಉದಕವ ನುಂಗಿ, ಸಿರಿ ದರಿದ್ರವ ನುಂಗುವುದ ಕಂಡೆ. ಇದೇನು ಚೋದ್ಯ ಹೇಳಾ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.