Index   ವಚನ - 83    Search  
 
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |