ಕುಲದಲ್ಲಿ ಶಿವಕುಲವೆಂಬೆ,
ಛಲದಲ್ಲಿ ಶಿವಛಲವೆಂಬೆ,
ರೂಪದಲ್ಲಿ ಶಿವರೂಪವೆಂಬೆ,
ಯೌವ್ವನದಲ್ಲಿ ಶಿವಯೌವ್ವನವೆಂಬೆ,
ವಿದ್ಯೆಯಲ್ಲಿ ಶಿವವಿದ್ಯೆಯೆಂಬೆ,
ಧನದಲ್ಲಿ ಶಿವಧನವೆಂಬೆ, ರಾಜ್ಯದಲ್ಲಿ ಶಿವರಾಜ್ಯವೆಂಬೆ,
ತಪದಲ್ಲಿ ಶಿವತಪವೆಂಬೆ.
ಇಂತೀ ಅಷ್ಟಮದಮುಖದಲ್ಲಿ
ಶಿವಮುಖವಾಗಿಪ್ಪ ಶಿವಶರಣರ
ಚರಣಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Kuladalli śivakulavembe,
chaladalli śivachalavembe,
rūpadalli śivarūpavembe,
yauvvanadalli śivayauvvanavembe,
vidyeyalli śivavidyeyembe,
dhanadalli śivadhanavembe, rājyadalli śivarājyavembe,
tapadalli śivatapavembe.
Intī aṣṭamadamukhadalli
śivamukhavāgippa śivaśaraṇara
caraṇakke namō namō embenayyā
paramaguru paḍuviḍi sid'dhamallināthaprabhuve.
ಸ್ಥಲ -
ಬಹಿರಂಗದ ಅಷ್ಟಮದ ನಿರಸನಸ್ಥಲ