Index   ವಚನ - 99    Search  
 
ಮದ ಎಂಟರೊಳು ಸಿಲ್ಕಿ ಮೈಮರೆದು ಅಲ್ಲಮನ ಪಾದಯುಗಳನು ಮರೆಯದಿರು ಮರೆದರೆ ಆತ್ಮ ಸುಧೆಯ ಹೊರಚೆಲ್ಲಿ ಸುರೆಗಾಟಿಯ ಸವಿವವನ ವಿಧಿ ಕಂಡಾ ಶಿವನ ಮರೆಯದೆ ನೆನೆ ಆತ್ಮ. ಕುಲ ಛಲ ರೂಪ ಯೌವ್ವನ ಧನ ವಿದ್ಯೆ ರಾಜ್ಯ ಸಲೆ ತಪಮದವೆಂಬ ಎಂಟಾನೆಯವೆ ಆತ್ಮ. ನಿಲಿಸುವನು ದೃಢವೆಂಬ ಕಂಬದೊಳು ಕಟ್ಟಿಯೆ ಹಲವು ದೆಸೆಗವ ಹರಿಯಗೊಡದೆ ಎಲೆ ಆತ್ಮ. ತಲೆಯೊಳಗೆ ಮೀಟು ಶಿವಜ್ಞಾನಾಂಕುಶವ ಹಿಡಿದು ಕೊಲ್ಲುತಲಿರು ಕಂಡ್ಯಾ ಮಲಹರನ ಮರೆಯದೆ ಆತ್ಮ | 1| ಮರವು ಮೋಡವು ಕವಿದು ಕರಣೇಂದ್ರಿಯೆಂದೆಂಬ ಬಿರುಮಳೆಯು ಕರೆವುತೆ ಭೀತಿಯಾಗದೆ ಆತ್ಮ. ಬರಸಿಡಿಲು ಕಾಲನೆಂಬುವುದು ಚಿಟಿಚಿಟಿಲೆನುತ ಬರುತಲದೆ ಮುಂದೆ ರಕ್ಷಿಯಾಗಿರ್ದ ನೀ ಆತ್ಮ. ಅರಿಗಳಲ್ಲದೆ ಹಿತವರಾರಿಲ್ಲ ಕೇಳು ನೀ ಪರಮಾತ್ಮನನು ಮರೆಯದಿರು ಕಂಡ್ಯಾ ಆತ್ಮ. | 2 | ಕಾಳಗದಿ ಕೈಮರದ ಪಟ ಬರೆಸಿ ಮರಣಾರ್ಥಿ ಯೊಳಗಲಿದನಿಮಿಷಗೆ ಮೃತ್ಯು ಕೇಳಲೆ ಆತ್ಮ. ನಾಲಗುಳ್ಳನಕ ಶಿವಸ್ಮೃತಿಯ ಮರೆದರೆ ನಿನಗೆ ಕಾಲಮೃತ್ಯು ಮಾರಿಗಳು ಉಂಟೇ ಆತ್ಮ. ಹೋರಾಡಿ ಲಿಂಗಾಂಗಸಂಗ ಖಡ್ಗದಲ್ಲಿ ನೀ ಮೇಲಿಪ್ಪ ಗುರುಸಿದ್ಧ ಮಲ್ಲಿನಾಥನ ನಂಬು ಆತ್ಮ. | 3 |