Index   ವಚನ - 106    Search  
 
ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ, ಮಡದಿಮಕ್ಕಳಿಗೆಂದು ಮಡುಗಿಕೊಂಡು, ದಾನಧರ್ಮವ ಪರ ಉಪಕಾರಕ್ಕೆ ನೀಡದೆ, ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ], ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು ಧನಧಾನ್ಯ ಕಾಯುವವೆ? ಕಾಯವು. ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು, ಎರವಿನ ಮಕ್ಕಳ ನೆಚ್ಚಿಕೊಂಡು ಊರ ಸೀರಿಂಗೆ ಅಗಸ ಬಡದು ಸಾವಂತೆ, ಪರಾರ್ಥನರಕದೊಡವೆಯ ನೆಚ್ಚಿ ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು. ಬರುತೇನು ತರಲಿಲ್ಲ, ಹೋಗುತೇನು ಒಯ್ಯಲಿಲ್ಲ, ಹುಟ್ಟುತ್ತಲೆ ಬತ್ತಲೆ ಹೋಗುತಲೆ ಬತ್ತಲೆ. ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ. ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.