Index   ವಚನ - 109    Search  
 
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ, ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ, ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ ಎಂತು ಭಕ್ತನೆಂಬೆ? ಎಂತು ಮಹೇಶ್ವರನೆಂಬೆ? ಎಂತು ಪ್ರಸಾದಿಯೆಂಬೆ? ಎಂತು ಪ್ರಾಣಲಿಂಗಿಯೆಂಬೆ? ಎಂತು ಶರಣನೆಂಬೆ? ಎಂತು ಐಕ್ಯನೆಂಬೆ? ಬರಿಯ ಮಾತಿನ ಬಣಗರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.