Index   ವಚನ - 1199    Search  
 
ಡೊಂಕನ ಕೊಂಡು ಡೊಂಕನ ಕಾಡುವಡೆ ನಮ್ಮ ಡೊಂಕನೆ ಸಾಲದೆ? ಕೆಮ್ಮುವನಾದಡೆ ನಮ್ಮವನೆ ಸಾಲದೆ? ಎಂಬ ಲೋಕದ ಗಾದೆಯ ಮಾತಿನಂತೆ; ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ ಅವರ ಹಿರಯರೆಂಬೆ, ಗುರುವೆಂಬೆ. ಅವರಿಗೆ ನಮೋ ನಮೋ ಎಂಬೆ. ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ, ಆ ಗುರುವಿಂಗೆ ಏಳನೆಯ ನರಕ, ಭವಘೋರದಲ್ಲಿ ಓಲಾಡುತ್ತಿಹ. ಇದು ಕಾರಣ, ಡೊಂಕನ ಕೊಂಡು ಸಸಿನವ ಕೊಡಬಲ್ಲ ಗುರು, ಅಪೂರ್ವ ಕಾಣಾ ಗುಹೇಶ್ವರಾ.