Index   ವಚನ - 120    Search  
 
ತನುವಿನ ಹಂಬಲವ ಮರೆದಂಗೆ ತನುವ್ಯಸನವೆಲ್ಲಿಯದೋ? ಮಾಯದ ಬೇಳುವೆಯನೊರಸಿದಾತಂಗೆ ಮನವ್ಯಸನವೆಲ್ಲಿಯದೋ? ಶಿವಜ್ಞಾನದೊಳಿಂಬುಗೊಂಡಾತಂಗೆ ಧನವ್ಯಸನವೆಲ್ಲಿಯದೋ? ಶಿವಲಿಂಗ ವಿಶ್ವಾಸದಿ ಅನುಮಿಷದೃಷ್ಟಿಯಿಟ್ಟಾತಂಗೆ ವಿಶ್ವಾಸವ್ಯಸನವೆಲ್ಲಿಯದೋ? ಶಿವಲಿಂಗ ಸಾಧ್ಯಮಾಡಿ ಕರುಣಕೃಪೆ ಪಡೆದಾತಂಗೆ ಸೇವಕವ್ಯಸನವೆಲ್ಲಿಯದೋ? ಇಂತೀ ಸಪ್ತವ್ಯಸನಂಗಳಮುಖದಲ್ಲಿ ಶಿವತನು ಶಿವಮನ ಶಿವದ್ರವ್ಯ ಶಿವರಾಜ್ಯ ಶಿವಉತ್ಸಾಹ ಶಿವವಿಶ್ವಾಸ ಶಿವಸೇವಕವೆಂದಿಪ್ಪ ಶರಣರ ಚೆಮ್ಮಾವುಗೆಯ ಕಿರುಗುಣಿಕೆಯ ಮಾಡೆನ್ನನಿರಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.