Index   ವಚನ - 123    Search  
 
ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ. ಧನವ ಬೇಡುವ ಧನಿಕನ ನುಂಗುವುದ ಕಂಡೆನು. ರಾಜ್ಯ[ವ]ನಾಳೇನೆಂಬ ಅರಸು ತೇಜಿಯ ಕಡಿವಾಣದೊಳಡಗುವುದ ಕಂಡೆ. ಉತ್ಸಾಹವ ಬೇಡುವ ಹೆಣ್ಣು ಉಮ್ಮತ್ತದಕಾಯೊಳಡಗಿದ್ದುದ ಕಂಡೆನು. ವಿಶ್ವಾಸದಿಂದ ಕುಡಿದ ಅಮೃತ ವಿಷವಾಗುವುದ ಕಂಡೆನು. ಸೇವಕ ಒಡೆಯನ ಕಾಣದೆ ಬಟ್ಟೆಬಟ್ಟೆಯಲರಸುವುದ ಕಂಡೆನು. ಇದೇನು ಚೋದ್ಯ ಹೇಳಾ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.