Index   ವಚನ - 137    Search  
 
ಎಲ್ಲಿ ನೋಡಿದರೆನ್ನಯ ಮನವಿಪ್ಪುದು. ಜಗದಗಲದಲ್ಲಿ ನೋಡಿದರೆನ್ನ ಮನವಿಪ್ಪುದು. ಸಪ್ತಸಾಗರದಿಂದತ್ತತ್ತವೆನ್ನಯ ಮನವಿರುತ ಚರಿಸುತಿಪ್ಪುದು. ಸಾಕ್ಷಿ ಗ್ರಂಥ: ``ಮಕಾರಂ ಮರುತರೂಪಯೋ ನಕಾರಂ ನಾಹಂ ಕೋಹಂ |(?) ಅಕ್ಷರದ್ವಯ ಮನೋ ನಾಮ ಸರ್ವದಾ ಸಮಾಶ್ರೀತಂ ||'' ಎಂದುದಾಗಿ, ಮನವೆಂಬ ವಾಯು ಹರಿದು ಗಳಿಗೆ ಗಳಿಗೆಗೆ ಒಂದೊಂದು ನೆನೆನೆನೆದು ಹಂಬಲಿಸಿ ಹತವಾಗುತಿದೆ. ಮನದ ಗಂಧೆಯ ತುರುಸಿದರೆ ಸುಖವಾಗುತಿದೆ. ಸುಖದಿಂದ ದುಃಖ, ದುಃಖದಿಂದ ಪ್ರಳಯಕ್ಕಿಕ್ಕಿ ಕೊಲ್ಲುತಿದೆ ಮನ. ಮನವೆಂಬ ಮಾಯದ ಬಲೆಯಲೆನ್ನ ಕೆಡವದೆ ಉಳುಹಿಕೊಳ್ಳಯ್ಯ ನಿರ್ಮಳ ನಿರ್ಮಳಾತ್ಮಕ ಜಗದಾರಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.