ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ
ಗೂಡುಮಾಡಿಕೊಂಡು
ದಿಕ್ಕುದಿಕ್ಕನ್ನೆಲ್ಲ ಚರಿಸ್ಯಾಡಿ ಬರುತಿಪ್ಪದು.
ಆ ಪಕ್ಷಿಯ ನೆರಳು ಬೀಳೆ ಯತಿ
ಸಿದ್ಧ ಸಾಧ್ಯ ಯೋಗಿಗಳ
ಯೋಗತ್ವ ಯತಿತನ ಸಿದ್ಧತ್ವ ಕೆಟ್ಟು
ಕೆಲಸಾರಿ ಹೋಗುವುದ ಕಂಡೆ.
ಪಕ್ಕವಿಲ್ಲದ ಹಕ್ಕಿಯ ಕೊಂದು
ಅಕ್ಕಜನ ಪಂಜರವ ಮುರಿದುದಲ್ಲದೆ ನಿರ್ಮನನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Pakkavillada hakki akkajana pan̄jarava
gūḍumāḍikoṇḍu
dikkudikkannella carisyāḍi barutippadu.
Ā pakṣiya neraḷu bīḷe yati
sid'dha sādhya yōgigaḷa
yōgatva yatitana sid'dhatva keṭṭu
kelasāri hōguvuda kaṇḍe.
Pakkavillada hakkiya kondu
akkajana pan̄jarava muridudallade nirmananalla kāṇā
paramaguru paḍuviḍi sid'dhamallināthaprabhuve.
ಸ್ಥಲ -
ಮನೋವಿಕಾರ ನಿರಸನಸ್ಥಲ