Index   ವಚನ - 155    Search  
 
ಲಿಂಗಾಸಕ್ತಂಗೆ ಅಂಗಾಸಕ್ತಿವುಂಟೇನಯ್ಯಾ? ಜಂಗಮಾಸಕ್ತಂಗೆ ಅನ್ಯಸಂಗ ಪರಧನ ಪರಸ್ತ್ರೀಯರಾಸೆ ಉಂಟೇನಯ್ಯಾ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ನಿಮ್ಮಾಸೆಯೊಳು ಇಂಬುಗೊಂಡಾತಂಗೆ ಜನ್ಮ ಮೃತ್ಯುವುಂಟೇನಯ್ಯಾ?