Index   ವಚನ - 163    Search  
 
ಏನ ಹೇಳುವೆನಯ್ಯಾ? ಸಂಸಾರಬಂಧನದಲ್ಲಿ ಕಂದಿಕುಂದಿದೆನಯ್ಯಾ. ಅದು ಎಂತೆಂದರೆ: ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ. ಗಾಳಿಗುಲಿವ ತರಗೆಲೆಯಂತೆ, ಸಂಸಾರವೆಂಬ ಸುಂಟರಗಾಳಿ ಆಕಾಶಕ್ಕೆ ನೆಗವಿ, ಭೂಕಾಂತೆಗೆನ್ನಬಿಟ್ಟು, ಕಣ್ಣು ಬಾಯೊಳು ಹುಡಿಯಂ ಹೊಯಿದು, ಮಣ್ಣಕಾಯವ ಮಣ್ಣಿಂಗೆ ಗುರಿಮಾಡಿ ಕಾಡುತಿಪ್ಪುದೀ ಸಂಸಾರವೆಂಬ ಹೆಮ್ಮಾರಿಯ ಬಾಯಿಗೆನ್ನನಿಕ್ಕದೆ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.