Index   ವಚನ - 169    Search  
 
ಪಂಕದೊಳು ಬಿದ್ದ ಪಶುವಿನಂತೆ ಸಂಸಾರರಸವಿಷಯದ ಕೊಗ್ಗೆಸರ ನಟ್ಟನಡು ಹುದಿಲೊಳಿಪ್ಪವನ ಪಶುವಿನೊಡೆಯ ಪಶುವನರಸಿಕೊಂಡು ಬಂದು ಎಳೆತೆಗೆವಂತೆ ನರಪಶು ನನ್ನವನೆಂದು ಹುದಿಲೊಳಿಪ್ಪವನ ತೆಗೆದು ಕರುಣಜಲವೆಂಬ ನೀರೆರೆದು ಮೈದೊಳೆದು ತಲೆದಡಹಿ ಕಾಯಿದು ರಕ್ಷಣ್ಯವ ಮಾಡಿಕೊಳ್ಳಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.