ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು
ಸಂಸಾರವಲ್ಲ ಕಾಣಿರೋ.
ಸಂಸಾರವಾವುದೆಂದರೆ ಹೇಳುವೆ ಕೇಳಿರಣ್ಣ.
ತನುವೆಂಬುದೆ ಮನೆ, ಪ್ರಾಣನಾಯಕನೆಂಬುವನೆನ್ನೊಡೆಯ,
ಶರೀರಮಾಯೆಯೆಂಬುವಳೆ ಹೆಣ್ಣು,
ಪಂಚಭೂತವೆ ಮಕ್ಕಳು ಕಾಣಿರಣ್ಣ.
ಪಂಚೇಂದ್ರಿಯಮುಖದಲ್ಲಿ
ಬಳಸುತಿಪ್ಪ ವಿಷಯವೆ ದ್ರವ್ಯಕಾಣಿರೊ.
ಅರುವತ್ತಾರುಕೋಟಿ
ಕರಣದೊಳಿಂಬುಗೊಂಡಿಪ್ಪುದೆ ಬಂಧುಬಳಗ.
ಇಂತಪ್ಪ ಸಂಸಾರವನರಿಯದೆ,
ತಮ್ಮ ತಿಂದು ತೇಗುವುದನರಿಯದೆ,
ಹೋರಾಟದ ಸಂಸಾರವ ಕಂಡರೆ
ಸಂಸಾರವೆಂದು ನುಡಿಯುತಿಪ್ಪರಯ್ಯ.
ಈ ಸಂಸಾರಮಾಯೆಯ ಕಳೆದಿಪ್ಪವರೆನ್ನ ಪ್ರಾಣಲಿಂಗ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Mane maḍadi makkaḷu dravya bandhubaḷagavembudu
sansāravalla kāṇirō.
Sansāravāvudendare hēḷuve kēḷiraṇṇa.
Tanuvembude mane, prāṇanāyakanembuvanennoḍeya,
śarīramāyeyembuvaḷe heṇṇu,
pan̄cabhūtave makkaḷu kāṇiraṇṇa.
Pan̄cēndriyamukhadalli
baḷasutippa viṣayave dravyakāṇiro.
Aruvattārukōṭi
karaṇadoḷimbugoṇḍippude bandhubaḷaga.
Intappa sansāravanariyade,
tam'ma tindu tēguvudanariyade,
hōrāṭada sansārava kaṇḍare
sansāravendu nuḍiyutipparayya.
Ī sansāramāyeya kaḷedippavarenna prāṇaliṅga kāṇā
paramaguru paḍuviḍi sid'dhamallināthaprabhuve.