Index   ವಚನ - 190    Search  
 
ಸಸಿಯ ಮೇಲೆ ಸಾಗರ ಹರಿವುದ ಕಂಡೆನು. ರಾಶಿಯನೊಕ್ಕುವ ಒಕ್ಕಲಿಗ ರಾಶಿಯ ನುಂಗುವುದ ಕಂಡೆನು. ಮಾಸಿದ ಕಪ್ಪಡವ ಅಂಗಕ್ಕೆ ತೊಟ್ಟ ಅಂಗನೆ, ಮೂರುಲೋಕವ ಏಡಿಸುವುದ ಕಂಡೆನು. ಮುಂಡ ಕುಣಿಯದ ಮುನ್ನ ಲೋಕವೆಲ್ಲ ಭಂಡಾಗಿ, ಸಂಸಾರಬಂಧನರಾಗಿರುವುದ ಕಂಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.