Index   ವಚನ - 232    Search  
 
ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ ಲಿಂಗಮಯವೆಂದು ಜ್ಞಾನದ ಕಣ್ಣಲಿ ಕಂಡು, ಅರುಹು ಪರಮಾರ್ಥನೊಳು ಬೆರದು, ಅಚಲಿತಶರಣನಾದೆನೆಂದು, ಬಹಿರಂಗದಲ್ಲಿ ಗುರುಕರುಣದ ಇಷ್ಟಲಿಂಗಧಾರಣವಿಲ್ಲದಿರಬಹುದೇ? ಇರಬಾರದು ; ಇದ್ದರೆ ಮಹಾನರಕ. ಮೂರುಕಣ್ಣುಳ್ಳ ಶಿವನಾದರೂ ಆಗಲಿ, ಅಂಗದ ಮೇಲೆ ಇಷ್ಟಲಿಂಗವಿಲ್ಲದೆ ಸುಜ್ಞಾನಿಶರಣನಾದನೆಂದು ನುಡಿದುಕೊಂಡು ನಡೆದರೆ ಅದ ನಮ್ಮ ಪುರಾತರು ಮೆಚ್ಚುವರೆ? ಮೆಚ್ಚರು. ಮೆಚ್ಚರಾಗಿ ನಾಯಕನರಕ ತಪ್ಪದು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.