Index   ವಚನ - 239    Search  
 
ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ ಆಕಾರವಾಗಿ ಬಂದರೆ ಹೊಗಳಲಮ್ಮೆ, ಹೊಗಳದಿರಲಮ್ಮೆ. ಅದೇನು ಕಾರಣವೆಂದರೆ: ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.