Index   ವಚನ - 255    Search  
 
ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ ಕುರಿಮಾನವ ನೀ ಕೇಳಾ. ಹರ ನಿತ್ಯ, ಹರಿಯಜಾಸುರರು ಅನಿತ್ಯ. ಅದೇನು ಕಾರಣವೆಂದರೆ: ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ, ಸುರರ ಪ್ರಳಯವೆಂದರೆ ಅಳವಲ್ಲ. ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹುಟ್ಟುವ ಅನಿತ್ಯದೈವವ ತಂದು ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.