Index   ವಚನ - 264    Search  
 
ತ್ರಿಪುಂಡ್ರ ತ್ರಿದೇವರುತ್ಪತ್ಯಸ್ಥಿತಿಲಯವ ಕೆಡಿಸುವುದೆಂದು ಭಾಳೊಳು ಶ್ರೀ ವಿಭೂತಿಯ ಧರಿಸಕಲಿಸಿದನಯ್ಯಾ ಶ್ರೀಗುರು. ಅದು ಎಂತೆಂದರೆ: ಪ್ರಥಮಪುಂಡ್ರ ಬ್ರಹ್ಮನ ಉತ್ಪತ್ಯವ ಕೆಡಿಸುವುದೆಂದು, ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಯ ಕೆಡಿಸುವುದೆಂದು ತೃತೀಯಪುಂಡ್ರ ರುದ್ರನ ಲಯದ ಹೊಡೆಗಿಚ್ಚ ಕೆಡಿಸುವುದೆಂದು ಅರುಹಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.