ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ.
ಗುರುಲಿಂಗಜಂಗಮವೆ ಶಿವನೆಂದು
ಅರ್ಥ ಪ್ರಾಣ ಅಭಿಮಾನವ ಸೇವಿಸುತ್ತಿಪ್ಪಾತನೆ ಶಿವಭಕ್ತ.
ಸಾಕ್ಷಿ:
ʼಅರ್ಥಪ್ರಾಣಬ್ಥಿಮಾನಂ ಚ ಗುರೌ ಲಿಂಗೇ ತು ಜಂಗಮೇ |'
ತಲ್ಲಿಂಗ ಜಂಗಮದಲ್ಲಿ ಧನವಂಚಕನಾಗಿ ಮಾಡುವ ಭಕ್ತಿಯ
ತೆರನೆಂತೆಂದರೆ : ನರಿಯ ಕೂಗು ಸ್ವರ್ಗಕ್ಕೆ ಮುಟ್ಟುವುದೆ?
ಹರಭಕ್ತಿಯಲ್ಲಿ ನಿಜವನರಿಯದೆ ಮಾಡಿದ ಭಕ್ತಿ
ಸಯಿಧಾನದ ಕೇಡು ಕಾಣಾ
ಪರಮ[ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].
Art
Manuscript
Music
Courtesy:
Transliteration
Guruliṅgajaṅgamava nere nambippātane śivabhakta.
Guruliṅgajaṅgamave śivanendu
artha prāṇa abhimānava sēvisuttippātane śivabhakta.
Sākṣi:
ʼarthaprāṇabthimānaṁ ca gurau liṅgē tu jaṅgamē |'
talliṅga jaṅgamadalli dhanavan̄cakanāgi māḍuva bhaktiya
teranentendare: Nariya kūgu svargakke muṭṭuvude?
Harabhaktiyalli nijavanariyade māḍida bhakti
sayidhānada kēḍu kāṇā
parama[guru paḍuviḍi sid'dhamallināthaprabhuve].