Index   ವಚನ - 301    Search  
 
ಶಿವಪೂಜೆಯ ಮಾಡುತಿದ್ದೆನೆಂಬ ಅಣ್ಣಗಳು ನೀವು ಕೇಳಿರೊ. ಶಿವ ಮಹೇಶ್ವರರುಗಳು ಗೃಹದ ಮುಂದೆ ಬಂದು ಲಿಂಗಾರ್ಪಿತವೆಂಬ ಶಬ್ದವಿಡಲು, ಜಪವ ಮಾಡುತ ನಾನೇಳಬಾರದೆಂದು ಬೆಬ್ಬನೆ ಬೆರತು, ಅಹಂಕಾರದಲ್ಲಿ ಸತಿ ಸುತರುಗಳ ಕೈಯಲ್ಲಿ ಬಿನ್ನಹವ ಮಾಡಿಸದೆ, ತಾನೆ ಭಕ್ತಿಕಿಂಕುರ್ವಾಣದಿಂದೆದ್ದು ಭಸ್ಮಾಂಗಿಗಳಿಗೆ ಆಸನವ ಕೊಟ್ಟು, ಮಾಡುವ ನಡೆನುಡಿಯು ಒಂದೇ ಆದರೆ, ಮೃಢ ಬೇರೆ ಒಂದೆ ಕಡೆ [ಇರದೆ ಇವರೊ]ಡಲೊಳಿಪ್ಪನು ಕಾಣಿರೋ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.