ತನುವೆಂಬ ದೇವಸ್ಥಾನದೊಳಗೆ
ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ
ಪ್ರಾಣಲಿಂಗಸ್ವಯಂಭು ಪ್ರತಿಷ್ಠೆಯಾಗಿರಲು,
ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ
ಲಿಂಗವೆಂಬ ಉಚ್ಚಾಯ ವಿಗ್ರಹವನು
ಕರಸ್ಥಲವೆಂಬ ರಥದಲ್ಲಿ ಮೂರ್ತಿಗೊಳಿಸಿ,
ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ
ಎರಡು-ಪಾದದ್ವಯ ಎರಡು ಕೂಡಿ
ನಾಲ್ಕು ಗಾಲಿಗಳಂ ಹೂಡಿ,
ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ
ಏಕೋಭಾವವೆಂಬ ಕಳಸವನಿಟ್ಟು,
ದಶವಾಯುಗಳೆಂಬ ಪಾಶವಂ ಬಂಧಿಸಿ
ಷಡಂಗಗಳೆಂಬ ಮೊಳೆಗಳಂ ಬಲಿದು,
ಸಪ್ತಧಾತುವೆಂಬ ಝಲ್ಲಿ ಪಟ್ಟೆಯನಲಂಕರಿಸಿ
ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ
ಮಹಾನಾದವೆಂಬ ಭೇರಿ ವಾದ್ಯಂಗಳಿಂ
ಷೋಡಶವಿಕಾರಂಗಳೆಂಬ ನರ್ತಕೀ ಮೇಳದಾರತಿಯಿಂ
ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ
ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ ಪಿಡಿಸಿ,
ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ,
ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ,
ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು
ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ
ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ
ಪ್ರವೇಶವಾದನು ಕಾಣಾ ಗುಹೇಶ್ವರಾ.
Transliteration Tanuvemba dēvasthānadoḷage
mastakāgravemba sejjāgr̥hadalli
prāṇaliṅgasvayambhu pratiṣṭheyāgiralu,
guruvemba ārcakanu mantravemba āgamikanu saha
liṅgavemba uccāya vigrahavanu
karasthalavemba rathadalli mūrtigoḷisi,
ā karasthalavemba rathakke jñānakriye
eraḍu-pādadvaya eraḍu kūḍi
nālku gāligaḷaṁ hūḍi,Pan̄cēndriyagaḷemba patākegaḷaṁ dharisi
ēkōbhāvavemba kaḷasavaniṭṭu,
daśavāyugaḷemba pāśavaṁ bandhisi
ṣaḍaṅgagaḷemba moḷegaḷaṁ balidu,
saptadhātuvemba jhalli paṭṭeyanalaṅkarisi
aṣṭamada saptavyasanaṅgaḷemba āne kuduregaḷu saha
mahānādavemba bhēri vādyaṅgaḷiṁ
ṣōḍaśavikāraṅgaḷemba nartakī mēḷadāratiyiṁ
antaḥkaraṇa catuṣṭayagaḷemba cāmaradhārakariṁ
manavemba horajeyiṁ karaṇaṅgaḷemba kālāḷgaḷiṁ piḍisi,
subud'dhiyemba bhūmiyalli ānandavembarasu rathamaṁ naḍesi,Iṣṭaliṅgavemba uccāya vigrahavannu
hr̥dayakamalavemba antarāḷadalli mūrtigoḷisi
ānandavemba arasu nirāḷavemba aparimita paṭṭaṇava
pravēśavādanu kāṇā guhēśvarā.
Hindi Translation तनु जैसे मंदिर में मस्तकाग्र जैसे शयनगृह में,
प्राणलिंग स्वयं प्रतिष्टा बनी हो तो,
गुरु जैसा अर्चक मंत्र जैसे आगमिक भी
लिंग जैसे उत्सव विग्रह को करस्तल जैसे रथ में मूर्तकर -
उस करस्थल जैसे रथ को ज्ञान क्रिया दो पादद्वय दोनों मिलकर
चार पहियों को सजाये, पंचेंद्रिय जैसे पता का बांधकर
एकोभाव जैसे कलश रखकर, दशवायु जैसे पाश से बांधकर
षडंग जैसे कील पीटकर, सप्तधातु जैसे
रेशम कपडों से अलंकृत कर
अष्ट मद सप्त व्यसन जैसे हाथी घोडे भी
महा नाद जैसे नगाडे वाद्यसहित
षोडश विकार जैसी नर्तकी मेला आरती से
अंतःकरण चतुष्टय जैसे चामर धारकों से
मन जैसे मोटे रस्सी, करण जैसे पदातियों से पकड़वाये
सुबुद्धि जैसी भूमि में आनंद जैसे राजा रथ चलाते
याद निष्पत्ती जैसे स्थान में खडाकर-
इष्टलिंग जैसे उत्सव विग्रह को
हृदय कमल जैसे अंतराल में मूर्त बनाकर
आनंद जैसा राजाने निराल जैसे अपरिमित शहर को
प्रवेश किया देख गुहेश्वरा।
Translated by: Eswara Sharma M and Govindarao B N