Index   ವಚನ - 10    Search  
 
ಅಯ್ಯಾ, ನಿನ್ನ ಬೆಳಗುಯೆದ್ದು ನಿಂದಲ್ಲಿ ಎನ್ನ ಸಂದುಸಂದಿನ ಬಂಧುಗಳೆಲ್ಲ ಬೆಂದುನಿಂದರು. ಚಲುವಾಯಿತ್ತೆ ನಿನಗೆ, ಗೆಲುವಾಯಿತ್ತೆ ಎನಗೆ, ಬಲುವಾಯಿತ್ತೆ ಮುಂದೆ ಘನತೆ? ಅರಿದು ಬಂದಾವರಿಸು ನಿರಂಜನ ಚನ್ನಬಸವಲಿಂಗಾ.