Index   ವಚನ - 19    Search  
 
ಅಂತಾಲಯದೊಳೊಂದಿ ಚರಿಸುವ ಭ್ರಾಂತಿಮಾಯೆಯ ನಿಂತು ನೋಡುವರನಾರನು ಕಾಣೆನು, ನೋಡುವ ನೋಟಕರ ನುಂಗುತ್ತ ಉಗುಳುತ್ತ ಉಚ್ಫಿಷ್ಟ ರೂಪನೆ ಮಾಡಿ ಕಾಡಿತ್ತು ಷಡುದರ್ಶನಾದಿ ಸಕಲರನು ; ಇನ್ನುಂಟೆ ನಿನಗಿದಿರು ನಿರಂಜನ ಚನ್ನಬಸವಲಿಂಗ ಶರಣರಲ್ಲದೆ?