ಹುಸಿ ಕಳವು ಡಂಬಕದ ಸುಳುಹನಳಿದುಳಿದ
ಜ್ಞಾನಕಲಾತ್ಮನ ಕಂಡ ಚೌಪೀಠವಾಸನು,
ತ್ರಿವಿಧಾನುಗ್ರಹವ ಮಾಡಿ ಕಾಯ ಪ್ರಾಣಾತ್ಮ ಸನ್ನಿಹಿತನಾಗಿ
ತಾನೆಂಬ ಭಾವ ತಪ್ಪುವಂತೆಮಾಡಿ ಸಲಹಿದನೆನ್ನ
ನಿರಂಜನ ಚನ್ನಬಸವಲಿಂಗವೆಂಬ ಗುರುನಾಥಂಗೆ
ಶರಣು ಶರಣು ಶರಣೆನುತಿರ್ದೆನು.
Art
Manuscript
Music
Courtesy:
Transliteration
Husi kaḷavu ḍambakada suḷuhanaḷiduḷida
jñānakalātmana kaṇḍa caupīṭhavāsanu,
trividhānugrahava māḍi kāya prāṇātma sannihitanāgi
tānemba bhāva tappuvantemāḍi salahidanenna
niran̄jana cannabasavaliṅgavemba gurunāthaṅge
śaraṇu śaraṇu śaraṇenutirdenu.